Saturday, February 26, 2011

ಚೆನ್ನೈ ಭಾವ.

ನಾವೆಲ್ಲಾ ಒಂದಾಯೆಕು. ತನ್ನತನವ ಬಿಟ್ಟು ಎಲ್ಲೋರನ್ನು ತನ್ನಂತೆ ತಿಳಿಯೆಕು. ಈ ಮೂರು ದಿನದ ಬಾಳ್ವೆ ನಾಕು ಜೆನರೊಂದಿಂಗೆ ಹೊಂದಿಗೊಂಡು 'ತಾನೂ ಸಂತೋಷಲ್ಲಿ ಇರೆಕು, ಪರರೂ ಸಂತೋಷಲ್ಲಿ ಇರೆಕು' ಎಂಬ ಧ್ಯೇಯ ನಮ್ಮದಾಯೆಕು.

ಪ್ರಪಂಚಲ್ಲಿ ನಾವೆಲ್ಲಾ ಶ್ರೀ ಸಾಮಾನ್ಯನೇ ಸರಿ. ಆರೂ ಪರಿಪೂರ್ಣ ಅಲ್ಲ. ಒಬ್ಬೊಬ್ಬನ ಗುಣ ಒಂದೊಂದು. ಒಬ್ಬೊಬ್ಬನ ಕ್ರಮ ಒಂದೊಂದು. ಅದು ಅವನ ವೈಯ್ಯಕ್ಕ್ತಿಕ ಸ್ವಾತಂತ್ರ್ಯ. ಇನ್ನೊಬ್ಬನ ದೋಷವ ಎತ್ತಿ ತೋರ್ಸದ್ದೆ ಒಳ್ಳೆತನವ ಹೆರ್ಕಿಯೊಂಡು ಸಮುದಾಯಲ್ಲಿ ನಾವೂ ಒಬ್ಬ ಹೇಳಿ ಇಪ್ಪೋ ಬನ್ನಿ.
"...ಪರಗುಣ ಪರಮಾಣೂನ್ ಪರ್ವತೀ ಕೃತ್ಯ ನಿತ್ಯಂ ನಿಜಹ್ರ್ ದಿ ವಿಕಸಂತಃ ಸಂತಿ ಸಂತಃ ಕಿಯಂತಃ"